Shri Siddharoodha Swamiji Math Trust Committee

Hubballi

www.srisiddharoodhaswamiji.in

ಶ್ರೀಮಠದಲ್ಲಿ ಗೋಪಾಳಕಾಳ ನಿಮಿತ್ಯ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ
Date : 05-11-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-30.10.2025 ರಿಂದ 05.11.2025 ರವರೆಗೆ ಭಾಗವತ ಸಪ್ತಾಹ ಕಾರ್ಯಕ್ರಮ ನೆರವೇರಿತು, ದಿನಾಂಕ:-05.11.2025 ರಂದು ಸಾಯಂಕಾಲ 07-30 ಘಂಟೆಗೆ ಗೋಪಾಳಕಾಳ ನಿಮಿತ್ಯ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮವನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ನೆರವೇರಿಸಿದರು. ಶ್ರೀಮಠದ ಸಂಸ್ಕೃತ ಪಾಠಶಾಲೆಯಲ್ಲಿ ಭಾಗವತ್ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಪ್ರತಿ ನಿತ್ಯ ಮುಂಜಾನೆ 9-00 ಘಂಟೆಯಿAದ 12-00 ಘಂಟೆಯವರೆಗೆ ಹಾಗೂ ಮದ್ಯಾಹ್ನ 3-00 ಘಂಟೆಯಿಂದ 05-00 ಘಂಟೆಯವರೆಗೆ ಭಾಗವತ ಶಾಸ್ತçವನ್ನು ನಡೆಸಿಕೊಟ್ಟ ಶ್ರೀ ಶಿವಾನಂದ ಜೋಶಿಯವರು ಹಾಗೂ ದಾಸೋಹ ಸೇವೆ ನೆರವೇರಿಸಿದ ಶ್ರೀಮತಿ ನೀಲಮ್ಮ ಗೌಳಿ ಮತ್ತು ಡಂಬರಮತ್ತೂರ ಗ್ರಾಮದ ದಾನಿಗಳನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಹಾಗೂ ಸಿಬ್ಬಂದಿವರ್ಗದವರು ಮತ್ತು ಅನೇಕ ಭಕ್ತರು ಉಪಸ್ಥಿತರಿದ್ದರು.